ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ
ಶೃಂಗೇರಿಯ ಶ್ರೀ ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ (NSS) ಘಟಕ, ನೀತಿ-ಆಧ್ಯಾತ್ಮಿಕ ವೇದಿಕೆ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶ (IQAC) ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 157ನೇ ಜನ್ಮ ಜಯಂತಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶೃಂಗೇರಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷರಾದ ಶ್ರೀ ಹೆಚ್.ಎಂ. ಮಂಜುನಾಥಗೌಡ ಅವರು, ಮಹಾತ್ಮ ಗಾಂಧೀಜಿಯವರ ಹೋರಾಟದ ಮಾರ್ಗ ಹಾಗೂ ಅವರ ತತ್ವಾದರ್ಶಗಳನ್ನು ವಿವರಿಸಿದರು. ಗಾಂಧೀಜಿಯವರು ನಟಾಲ್ನಲ್ಲಿಯೂ ಹಾಗೂ ಭಾರತದಲ್ಲಿಯೂ ತಮ್ಮ ಹೋರಾಟಗಳನ್ನು ಹಿಂಸಾತ್ಮಕ ರಾಜಕೀಯ ಬಂಡಾಯದ ರೂಪದಲ್ಲಿ ನಡೆಸದೆ, ಸತ್ಯ, ಅಹಿಂಸೆ ಹಾಗೂ ನೈತಿಕತೆಯನ್ನು ಆಧರಿಸಿದ ಹೋರಾಟದ ಮಾರ್ಗವನ್ನು ಅನುಸರಿಸಿದರು ಎಂದು ತಿಳಿಸಿದರು. ಈ ಮಾರ್ಗವು ಅವರ ಧಾರ್ಮಿಕ ಹಾಗೂ ನೈತಿಕ ದೃಷ್ಟಿಕೋನದಿಂದ ರೂಪುಗೊಂಡಿದ್ದು, ನಿರಂತರ ಹೋರಾಟದ ಮೂಲಕ ಅವರು ತಮ್ಮ ಜೀವನದಲ್ಲಿ ಯಶಸ್ಸನ್ನು ಕಂಡು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ಕೊಡುಗೆ ನೀಡಿದರು ಎಂದು ಹೇಳಿದರು. ಗಾಂಧೀಜಿಯವರನ್ನು ಜಗತ್ತಿನ ವಿಸ್ಮಯಕಾರಿ ದೇಶೋದ್ಧಾರಕ, ಸಮಾಜಮುಖಿ ಚಿಂತಕ ಹಾಗೂ ಮಹಾನ್ ದಾರ್ಶನಿಕ ಎಂದು ಬಣ್ಣಿಸಿದ ಅವರು, ಗಾಂಧೀಜಿಯವರು ತಮ್ಮ ವಿಚಾರಗಳನ್ನು ಬರಹಗಳ ಮೂಲಕವೂ ಜನರಿಗೆ ತಲುಪಿಸ...