ಯುವನಿಧಿ ನೋಂದಣಿ ಅಭಿಯಾನ ಹಾಗೂ ಉದ್ಯೋಗ ಜಾಗೃತಿ ಕಾರ್ಯಕ್ರಮ

ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ನಿರ್ದೇಶನಾಲಯದ ವತಿಯಿಂದ ಶ್ರೀ ಜಗದ್ಗುರು ಚಂದ್ರಶೇಖರ ಭಾರತೀ ಸ್ಮಾರಕ ಮಹಾವಿದ್ಯಾಲಯ, ಶೃಂಗೇರಿಯಲ್ಲಿ ಅಕ್ಟೋಬರ್ 9ರಂದು ಯುವನಿಧಿ ನೋಂದಣಿ ಅಭಿಯಾನ ಹಾಗೂ ಉದ್ಯೋಗ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾಲೇಜಿನ  IQAC ಹಾಗು ಉದ್ಯೋಗ ಕೋಶದ  ಸಮಿತಿ,ಕೌಶಲ್ಯ ಅಭಿವೃದ್ಧಿ ಸಮಿತಿಯ  ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀ ಎನ್. ಹೆಚ್. ಲಕ್ಷ್ಮೀನಾರಾಯಣ ಅವರು ವಹಿಸಿದ್ದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀ ರಾಜು ಅವರು ಕಾರ್ಯಕ್ರಮವನ್ನು ಉದ್ಘಾಟಿದರು 

ಮುಖ್ಯ ಅತಿಥಿಗಳಾಗಿ ಚಿಕ್ಕಮಗಳೂರು ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗ ಅಧಿಕಾರಿಯಾದ  ಖಲಂದರ್ ಖಾನ್   ಅವರು ಭಾಗವಹಿಸಿ, ಕರ್ನಾಟಕ ಸರ್ಕಾರದ ಯುವನಿಧಿ ಯೋಜನೆಯ ಉದ್ದೇಶ, ಅರ್ಹತಾ ಮಾನದಂಡಗಳು, ನಿರುದ್ಯೋಗಿ ಪದವೀಧರರಿಗೆ ದೊರೆಯುವ ಆರ್ಥಿಕ ನೆರವು ಹಾಗೂ ನೋಂದಣಿ ಪ್ರಕ್ರಿಯೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಯುವನಿಧಿ ಯೋಜನೆಯ ಪ್ರಯೋಜನಗಳನ್ನು ಅರ್ಹ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಹಾಗೂ ಸರ್ಕಾರದ ಉದ್ಯೋಗ ಪೋರ್ಟಲ್‌ಗಳಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ವಿವಿಧ ಉದ್ಯೋಗಾವಕಾಶಗಳ ಮಾಹಿತಿಯನ್ನು ಪಡೆಯಬೇಕು ಎಂದು ತಿಳಿಸಿದರು. ಚಿಕ್ಕಮಗಳೂರು ಜಿಲ್ಲೆಯ ವಿದ್ಯಾರ್ಥಿಗಳ ಉದ್ಯೋಗ ನೋಂದಣಿಗೆ ಸಂಬಂಧಿಸಿದಂತೆ ಅಗತ್ಯ ಮಾರ್ಗದರ್ಶನ ನೀಡಲಾಯಿತು.

ಕಾರ್ಯಕ್ರಮದಲ್ಲಿ  ಕಾಲೇಜಿನ  ಐಕ್ಯೂಎಸಿ ಮತ್ತು ನ್ಯಾಕ್ ಸಂಯೋಜಕರಾದ ಡಾ. ವಸಂತ್ ಚವಾಣ್ , ಉದ್ಯೋಗ ಕೋಶದ  ಸಮಿತಿಯ ಸಂಚಾಲಕರಾದ  ಶ್ರೀ ಅಶೋಕ್ ಉಪಸ್ಥಿತರಿದ್ದರು.

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾದ ಶ್ರೀಮತಿ ಧನಲಕ್ಷ್ಮೀ , ಶ್ರೀ ರಮೇಶ್ ಟಿ. ಪಿ. ಹಾಗೂ ಶ್ರೀ ಜಯಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶ್ರೀ ಜಯಶ್ರೀ, ಕೌನ್ಸಿಲರ್ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರು ವಿಧ್ಯಾರ್ಥಿಗಳು ಯುವ ನಿಧಿ ಹಾಗು ಉದ್ಯೋಗ ನೋಂದಣಿಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಿದರು  

ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಸರ್ಕಾರದ ಯುವನಿಧಿ ಯೋಜನೆಯ ಕುರಿತು ಅರಿವು ಮೂಡಿಸುವುದರ ಜೊತೆಗೆ ಉದ್ಯೋಗ ನೋಂದಣಿಯ ಮಹತ್ವವನ್ನು ತಿಳಿಸುವಲ್ಲಿ ಸಹಕಾರಿಯಾಯಿತು. ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಭವಿಷ್ಯದ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಕಾರ್ಯಕ್ರಮವು ಪ್ರೇರಣೆ ನೀಡಿತು









Comments

Popular posts from this blog

Field identification of plants and understanding local biodiversity

Food for Health