ಕನ್ನಡ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭ
ದಿನಾಂಕ 10.09.2025 ರಂದು ಕನ್ನಡ ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ನಮ್ಮ ಕಾಲೇಜಿನ ಪ್ರಾಚಾರ್ಯರಾದ ಡಾII ಎಂ ಸ್ವಾಮಿರವರು ಘನ ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ಡಾII ಸರ್ಫ್ರಾಜ್ ಚಂದ್ರಗುತ್ತಿ ಲೇಖಕರು ಮತ್ತು ಉಪನ್ಯಾಸಕರು ಪದವಿ ಪೂರ್ವ ವಿಭಾಗ ಸಾಗರ ಇವರು ಆಗಮಿಸಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಹಾಗೂ ಸಾಹಿತ್ಯ ಸಂಘದ ಸಂಚಾಲಕರಾದ ಶ್ರೀಮತಿ ರಶ್ಮಿ ಕೆ ಆರ್ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕ ನುಡಿಯನ್ನು ಆಡಿದರು . ವಿಶ್ವಸ್ಥ ಮಂಡಳಿಯ ಸದಸ್ಯರಾದ ಶ್ರೀಮತಿ ಪುಷ್ಪ ಲಕ್ಷ್ಮಿ ನಾರಾಯಣ್ ರವರು ಈ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು .ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿಗಳಾದ ಪ್ರೊಫೆಸರ್ ನಾಗಭೂಷಣ್ ಬಿ ಆರ್ ಪದವಿಪೂರ್ವ ವಿಭಾಗದ ಉಪಪ್ರಾಂಶುಪಾಲರಾದ ಶ್ರೀಯುತ ಪ್ರಶಾಂತ್ ಎ ಜಿ,ನ್ಯಾಕ್ ಸಂಯೋಜಕರಾದ ಡಾ. ವಸಂತ್ ಚೌಹಾನ್ ಹಾಗೂ ಕಲಾಸಂಘದ ಅಧ್ಯಕ್ಷರಾದ ಕುಮಾರ ತ್ಯಾಗರಾಜ್ ಹಾಗೂ ಉಪಾಧ್ಯಕ್ಷರಾದ ಕುಮಾರಿ ಅಂಕಿತ ಸಿ ಇವರೆಲ್ಲರೂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿ ಹಾಗೂ ಉದ್ಘಾಟಕರಾಗಿ ಆಹ್ವಾನಿತರಾದ ಡಾII ಸರ್ಫ್ರಾಜ್ ಚಂದ್ರಗುತ್ತಿರವರು ತಾವು ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡಿದ ಬಗೆಯನ್ನು ಹಾಗೂ ಅನುಭವಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳಲ್ಲಿ ಅಡಗಿರುವ ಸಾಹಿತ್ಯದ ಚಿಗುರನ್ನು ಬೆಳೆಸುವ ಮಾರ್ಗವನ್ನು ತಿಳಿಸಿದರು. ಇವರಿಗೆ ಕಾಲೇಜಿನ ಪರವಾಗಿ ಗೌರವ ಸಮರ್ಪಣೆಯನ್ನು ನೀಡಲಾಯಿತು
.jpg)
.jpg)
.jpg)
.jpg)


Comments
Post a Comment