ಸಾಹಿತ್ಯ ಸಂಘದ ಉದ್ಘಾಟನ ಸಮಾರಂಭ
ಮನುಷ್ಯನ ಬದುಕಿಗೆ ಅರ್ಥ ಮತ್ತು ಮೌಲ್ಯಗಳನ್ನು ತುಂಬುವಲ್ಲಿ ಸಾಹಿತ್ಯದ ಪಾತ್ರ ಅನನ್ಯ. ಶೃಂಗೇರಿಯ ಶ್ರೀ ಜೆ.ಸಿ.ಬಿ.ಎಂ. ಕಾಲೇಜಿನಲ್ಲಿ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ, ೧೪-೦೮-೨೦೨೬ ರಂದು ಸಾಹಿತ್ಯ ಸಂಘದ ಉದ್ಘಾಟನಾ ಸಮಾರಂಭವು ಕಾಲೇಜಿನ ನಿರ್ಮಲಾ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.
ಸಮಾರಂಭದ ಅಧ್ಯಕ್ಷತೆ ಮತ್ತು ಗಣ್ಯರ ಸಮ್ಮುಖ
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ಸ್ವಾಮಿ ವಹಿಸಿಕೊಂಡು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡುವಂತೆ ಪ್ರೇರೇಪಿಸಿದರು. ಕುವೆಂಪು ವಿಶ್ವವಿದ್ಯಾಲಯದ ‘ಕನ್ನಡ ಭಾರತಿ’ ವಿಭಾಗದ ಉಪನ್ಯಾಸಕರಾದ ಡಾ. ಪುರುಷೋತ್ತಮ್ ಅವರು ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀ ಜೆ.ಸಿ.ಬಿ.ಎಂ. ಕಾಲೇಜಿನ ವಿಶ್ವಸ್ಥ ಮಂಡಳಿಯ ಸದಸ್ಯರಾದ ಪುಷ್ಪಲಕ್ಷ್ಮಿ ನಾರಾಯಣ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪ ಪ್ರಾಂಶುಪಾಲರಾದ ಎ. ಜಿ. ಪ್ರಶಾಂತ್, ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿಗಳಾದ ಪ್ರೊ. ವಿದ್ಯಾಧರ್ ಎಂ. ವಿ. ಹಾಗೂ ಐಕ್ಯೂಎಸಿ ಮತ್ತು ನ್ಯಾಕ್ ಸಂಯೋಜಕರಾದ ಡಾ. ವಸಂತ್ ಚೌವ್ಹಾಣ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶೋಭೆ ತಂದರು.
ವಿಶೇಷ ಉಪನ್ಯಾಸ: ‘ಮಲೆನಾಡಿನ ಹೂರಣವಾಗಿ ಮಲೆಗಳಲ್ಲಿ ಮದುಮಗಳು’
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಾ. ಪುರುಷೋತ್ತಮ್ ಅವರು “ಮಲೆನಾಡಿನ ಹೂರಣವಾಗಿ ಮಲೆಗಳಲ್ಲಿ ಮದುಮಗಳು” ಎಂಬ ವಿಷಯದ ಕುರಿತು ಅತ್ಯಂತ ಪ್ರಭಾವಿ ಹಾಗೂ ಚಿಂತನಾರ್ಹ ಉಪನ್ಯಾಸ ನೀಡಿದರು.
ಆಧುನಿಕ ಕಾಲಘಟ್ಟದಲ್ಲಿ ಬದಲಾಗುತ್ತಿರುವ ಸಾಹಿತ್ಯದ ಒಳನೋಟಗಳು ಹಾಗೂ ಅನ್ಯಾನುವೇಷಣೆಗಳ ಕುರಿತು ಅದ್ಭುತವಾಗಿ ವಿಶ್ಲೇಷಿಸಿದ ಅವರು, ಸಾಹಿತ್ಯ ಮತ್ತು ಬದುಕು ಪರಸ್ಪರ ಹೇಗೆ ಬೆಸೆದುಕೊಂಡಿರಬೇಕು ಎಂಬುದನ್ನು ವಿವರಿಸಿದರು. ಇಂದಿನ ತಲೆಮಾರು ಸಾಹಿತ್ಯ ಸಂವೇದನೆ ಹಾಗೂ ಬದುಕಿನ ನೈಜ ಭವಣೆಗಳಿಂದ ಹೊರಗೆ ಉಳಿಯುತ್ತಿರುವುದಕ್ಕೆ ಸಾಹಿತ್ಯದ ಮೇಲಿನ ನಿರಾಸಕ್ತಿಯೇ ಮುಖ್ಯ ಕಾರಣ ಎಂದು ಕಳಕಳಿ ವ್ಯಕ್ತಪಡಿಸಿದರು.
ಮುಂದುವರೆದು, ರಾಷ್ಟ್ರಕವಿ ಕುವೆಂಪು ಅವರ ಕಾಲಜಯಿ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯ ವಿವಿಧ ಸಂದರ್ಭಗಳನ್ನು ಉದಾಹರಿಸುತ್ತಾ, ಮಲೆನಾಡಿನ ಅನಂತ ದರ್ಶನವನ್ನು ಸಭಿಕರ ಮುಂದೆ ತೆರೆದಿಟ್ಟರು. ಅಂದಿನ ಸಮಾಜ, ರಾಜಕಾರಣ, ಸಾಮಾಜಿಕ ಸಂಬಂಧಗಳು, ಬದುಕು, ಪ್ರೀತಿ, ವ್ಯವಧಾನ ಹಾಗೂ ಸಮಕಾಲೀನ ವಿಚಾರಶೀಲತೆಯನ್ನು ಅತ್ಯಂತ ಎಳೆ ಎಳೆಯಾಗಿ ಸಂಕಥಿಸಿದರು.
ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆ
ಪ್ರಾಸ್ತಾವಿಕ ನುಡಿ: ಕನ್ನಡ ವಿಭಾಗದ ಉಪನ್ಯಾಸಕರಾದ ನಿತೀಶ್ ಕುಮಾರ್ ಕೆ. ಎನ್. ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸಾಹಿತ್ಯ ಸಂಘದ ಉದ್ದೇಶಗಳನ್ನು ಹಂಚಿಕೊಂಡರು.
ಸ್ವಾಗತ: ಕುಮಾರ ಮದನ್ ಆಗಮಿಸಿದ ಗಣ್ಯರನ್ನು ಮತ್ತು ಸಭಿಕರನ್ನು ಆದರದಿಂದ ಸ್ವಾಗತಿಸಿದರು.
ನಿರೂಪಣೆ: ಕುಮಾರಿ ಅಂಬಿಕಾ ಸಮಾರಂಭವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.
ವಂದನಾರ್ಪಣೆ: ಕುಮಾರ ತರುಣ್ ಸರ್ವರಿಗೂ ಧನ್ಯವಾದ ಸಮರ್ಪಿಸಿದರು.
ವಿದ್ಯಾರ್ಥಿಗಳಲ್ಲಿ ಸಾಹಿತ್ಯಿಕ ಆಸಕ್ತಿ ಮತ್ತು ವಿಚಾರಶೀಲತೆಯನ್ನು ಹೆಚ್ಚಿಸಲು ಈ ಉದ್ಘಾಟನಾ ಸಮಾರಂಭವು ಉತ್ತಮ ತಡಿಪಾಯವನ್ನು ಹಾಕಿಕೊಟ್ಟಿತು







Comments
Post a Comment