ಜೆ ಸಿ ಬಿ ಎಂ ಕಾಲೇಜಿನಲ್ಲಿ ಉದ್ಯೋಗ ಮೇಳ

 ಶ್ರೀ ಜೆಸಿಬಿಎಂ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟ ಕೋಶ, ಉದ್ಯೋಗ ಕೋಶದ ವತಿಯಿಂದ JOB FAIR -2024 ಅನ್ನು ಆಯೋಜಿಸಲಾಗಿತ್ತು. ವಿವಿಧೆಡೆಯಿಂದ 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಡ್ರೈವ್ ನಲ್ಲಿ ಪಾಲ್ಗೊಂಡಿದ್ದು 100  ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ಆದೇಶ ಪತ್ರವನ್ನು ನೀಡಲಾಯಿತು. ESSVEE RECRUITECH ಸಹಯೋಗದಲ್ಲಿ ವಿವಿಧ MNC ಕಂಪನಿಗಳು ಈ ಉದೋಗ್ಯ ಮೇಳದಲ್ಲಿ ಪಾಲ್ಗೊಂಡಿದ್ದವು. ಕಾಲೇಜಿನ ಪ್ರಾಚಾರ್ಯರಾದ ಡಾ ಎಂ ಸ್ವಾಮಿ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ನ್ಯಾಕ್ ಸಂಯೋಜಕರಾದ ಪ್ರೊ ಲಕ್ಷ್ಮೀ  ನಾರಾಯಣ , IQAC  ಸಂಯೋಜಕರಾದ ಪ್ರೊ ನಾಗಭೂಷಣ್, ವಿದ್ಯಾರ್ಥಿ ಕ್ಷೇಮಪಾಲನಾ  ಅಧಿಕಾರಿಯಾದ ಪ್ರೊ ಪ್ರಕಾಶ್ ಕೆ ಪಿ, ಉದ್ಯೋಗ ಕೋಶದ ಸಂಯೋಜಕರಾದ ಪ್ರೊ ವಿದ್ಯಾಧರ ಎಂ ವಿ, ವ್ಯಕ್ತಿತ್ವ ವಿಕಸನ ಸಮಿತಿಯ ಸಂಚಾಲಕರಾದ ಶ್ರೀ ಗುರುಪ್ರಸಾದ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು  



Comments

Popular posts from this blog

How to Prepare Resumes and Face Interviews

Inter-Collegiate Men’s Kabaddi Tournament