ವನ್ಯ ಜೀವಿಗಳಿಗಿರುವ ಅಪಾಯ ಮತ್ತು ಸಂರಕ್ಷಣೆ ಕಾರ್ಯಕ್ರಮ -ತರೀಕೆರೆ
ತರೀಕೆರೆ ಶಾಸಕರಾದ ಬಿ ಹೆಚ್ ಶ್ರೀನಿವಾಸ್ ರವರ ಜನಹಿತ ಸೇವಾ ಟ್ರಸ್ಟ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ,ಅರಣ್ಯ ಇಲಾಖೆ (ಭದ್ರ ಹುಲಿ ಸಂರಕ್ಷಿತ ಪ್ರದೇಶ) ವತಿಯಿಂದ ತರಿಕೆರೆ ವ್ಯಾಪ್ತಿಯ ಪ್ರೌಡಾ ಶಾಲಾ ಮಕ್ಕಳಿಗೆ ವನ್ಯ ಜೀವಿಗಳಿರುವ ಅಪಾಯ ಹಾಗು ಸಂರಕ್ಷಣೆ ಕುರಿತು ಉಪನ್ಯಾಸ ಹಾಗು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾಲೇಜಿನ ಪರಿಸರ ವಿಜ್ಞಾನ ಉಪನ್ಯಾಸಕರಾದ ಶ್ರೀ ರಾಘವೇಂದ್ರ ಎಂ ಪಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು 600 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ವನ್ಯ ಜೀವಿಗಳ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಂಡರು